HDBRTS Logo
HDBRTS Logo
HDBRTS Logo
ಎಪ್.ಎ.ಕ್ಯೂ

ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್. ಯೋಜನೆಯು ವಿಶ್ವಬ್ಯಾಂಕ್ ಸಹಾಯದಿಂದ ಹಾಗೂ ಗ್ಲೋಬಲ್ ಎನ್ವೈರನ್ಮೆಂಟಲ್ ಫೇಸಿಲಿಟಿ (ಜಿ.ಇ.ಎಫ್) ನೆರವಿನಿಂದ ಸುಸ್ಥಿರ ನಗರ ಸಾರಿಗೆ ಯೋಜನೆ ಎಸ್.ಯು.ಟಿ.ಪಿ ಅಡಿಯಲ್ಲಿ ಅನುಷ್ಠಾನಗೊಳಿಸುತ್ತಿರುವ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಧ್ಯೆ ಚತುಷ್ಪಥ ಬಿ.ಆರ್.ಟಿ.ಎಸ್ ಕಾರಿಡಾರನ್ನು ನಿರ್ಮಿಸಲಾಗುತ್ತಿದ್ದು, ಶೀಘ್ರ ಸುರಕ್ಷಿತ ಸುಖದಾಯಕ ಅನುಕೂಲಕರ ಹಾಗೂ ಕೈಗೆಟಕುವ ದರದಲ್ಲಿ ಸಾರ್ವಜನಿಕ ಸೇವೆ ಒದಗಿಸುವ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಅಲ್ಲದೆ ಈ ಯೋಜನೆಯು ಇಂಟಲಿಜೆನ್ಸ್ ಟ್ರಾನ್ಸ್ ಪೋರ್ಟ ಸಿಸ್ಟಮ್, ಪಾದಚಾರಿಗಳ ಮೂಲ ಸೌಲಭ್ಯವನ್ನು ಕಲ್ಪಿಸುವುದು ಹಾಗೂ ಬಸ್ ಟರ್ಮಿನಲ್, ಡಿಪೋ ಮುಂತಾದವುಗಳನ್ನು ಅಭಿವೃದ್ಧಿಸಲಾಗುವುದು.

ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್. ಯೋಜನೆಯು ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್. ಕಂ.ಲಿ ಇವರಿಂದ ಜಾರಿಗೊಳಿಸಲ್ಪಡುತ್ತದೆ. ಈ ಕಂಪನಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ವಾಕರಸಾಸಂ ಮತ್ತು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರಗಳು ಪಾಲುದಾರ ಸಂಸ್ಥೆಗಳಾಗಿವೆ. ನಗರ ಭೂ ಸಾರಿಗೆ ನಿರ್ದೇಶನಾಲಯ ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಸಹಾಯದೊಂದಿಗೆ ಕಂಪನಿಯು ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಸಾರ್ವಜನಿಕ ಸಾರಿಗೆ ಸಮಗ್ರ ಅಭಿವೃದ್ದಿಗೆ ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್. ಯೋಜನೆಯು ಹೆಚ್ಚು ಒತ್ತು ನೀಡುತ್ತದೆ. ಯೋಜನೆಯು ಬಿ.ಆರ್.ಟಿ.ಎಸ್. ಮಾರ್ಗಗಳ ನಿರ್ಮಾಣ ಸಾರ್ವಜನಿಕ ಸಾರಿಗೆಗಾಗಿ ಅವಶ್ಯವಾದ ಸೈಕಲ್ ಮತ್ತು ಪಾದಚಾರಿ ಮಾರ್ಗಗಳ ರಚನೆಗಳಂತಹ ಮೂಲಭೂತ ಸೌಲಭ್ಯಗಳ ಸುಧಾರಣೆಯೊಂದಿಗೆ ಸುಸ್ಥಿರ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಯೋಚಿಸುತ್ತದೆ. ಯೋಜನೆಯು ಸಾರ್ವಜನಿಕ ಸಾರಿಗೆಗೆ ಸೇವೆಯ ಗುಣಮಟ್ಟ ವೇಳಾಪಟ್ಟಿಗಳ ಅನುಸರಣೆ ಮೇಲ್ವಿಚಾರಣೆ & ಮೌಲ್ಯಮಾಪನ ಮಾಡಿ ಸೇವೆಯ ಗುಣಮಟ್ಟವನ್ನು ಸುಧಾರಿಸುವುದಾಗಿದೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಮಧ್ಯೆ ಬಿ.ಆರ್.ಟಿ.ಎಸ್. ಕಾರಿಡಾರ್ ಅಭಿವೃದ್ಧಿ ಪಡಿಸಲು ಸಮರ್ಪಿತವಾಗಿದೆ. ಕಾರಿಡಾರ್ 22.25 ಕಿ.ಮೀ. ಉದ್ದವಿರುತ್ತದೆ. ಹುಬ್ಬಳ್ಳಿ ಹೊಸೂರು ವೃತ್ತದಿಂದ ಧಾರವಾಡ ಜುಬಿಲಿ ವೃತ್ತದ ವರೆಗೆ (44 ಮೀ ಅಗಲ) ಚತುಷ್ಪಥ ಬಿ.ಆರ್.ಟಿ.ಎಸ್. ಕಾರಿಡಾರ್ ನಿರ್ಮಿಸುವುದಾಗಿದ್ದು ಹುಬ್ಬಳ್ಳಿ ಹೊಸೂರು ವೃತ್ತದಿಂದ ಹುಬ್ಬಳ್ಳಿ ನವೀನ ಹೋಟೆಲ್ ಹಾಗೂ ಧಾರವಾಡ ಗಾಂಧಿನಗರ ಕ್ರಾಸ್ ನಿಂದ ಧಾರವಾಡ ಜುಬಿಲಿ ವೃತ್ತದ ವರೆಗೆ ತ್ರಿಪಥ ರಸ್ತೆ (35 ಮೀ ಅಗಲ) ನಿರ್ಮಿಸುವುದಾಗಿದೆ. ಈ ಮಾರ್ಗದಲ್ಲಿ ಸಾಮಾನ್ಯ ಮತ್ತು ಎಕ್ಸ್ ಪ್ರೆಸ್ ಸೇವೆ ಎಂಬ ಎರಡು ಸೇವೆಗಳನ್ನು ಒದಗಿಸುವುದಾಗಿದೆ. ವಾ.ಕ.ರಸ್ತೆ ಸಾರಿಗೆ ಸಂಸ್ಥೆಯು ಸಾರಿಗೆ ವ್ಯವಸ್ಥೆ ನಿರ್ವಹಿಸುವುದು. ಕಾರಿಡಾರ್ ನಲ್ಲಿ ಬಿ.ಆರ್.ಟಿ.ಎಸ್. ಬಸ್ ಗಳನ್ನು ಹೊರತುಪಡಿಸಿ ಇತರೆ ಯಾವುದೇ ವಾಹನಗಳು ಸಂಚರಿಸಲು ಅವಕಾಶವಿರುವುದಿಲ್ಲ. ಬಿ.ಆರ್.ಟಿ. ಕಾರಿಡಾರನಲ್ಲಿ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುವುದು. ಪ್ರತಿ ಬಸ್ ನಿಲ್ದಾಣದಲ್ಲಿ ಎರಡು ಕಡೆಗಳಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಕಾರಿಡಾರ್ ಉದ್ದಕ್ಕೂ ಮಾರ್ಗದಲ್ಲಿ ಬಸ್ ನಿಲ್ದಾಣಗಳಿರುತ್ತವೆ.

ಬಿ.ಆರ್.ಟಿ ಬಸ್ ಗಳ ಅಳತೆ 900 ಮಿ.ಮೀ ಎತ್ತರ, 12 ಮೀ ಉದ್ದವಿರುತ್ತದೆ. ಇವುಗಳಲ್ಲಿ ಸಾಮಾನ್ಯ ಹಾಗೂ ಆರ್ಟಿಕ್ಯುಲೇಟ್ ಬಸ್ ಗಳಾಗಿರುತ್ತವೆ. ಬಸ್ ಮತ್ತು ಬಸ್ ನಿಲ್ದಾಣಗಳಲ್ಲಿ ಅಂಗವಿಕಲ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸಮತಟ್ಟಾದ ಹತ್ತುವ ವ್ಯವಸ್ಥೆ, ಮುಂಗಡ ಟಕೆಟ್ ಪಡೆಯುವ ವವ್ಯಸ್ಥೆ, ಪ್ರಯಾಣಿಕರಿಗೆ ಮಾಹಿತಿ ಒದಗಿಸುವ ವ್ಯವಸ್ಥೆ, ನುರಿತ ವಾಹನ ಚಾಲಕರ ಸೇವೆ, ನಿಲ್ದಾಣಗಳಲ್ಲಿ ನಿಯಂತ್ರಿತ ಆಗಮನ ಮತ್ತು ನಿರ್ಗಮನ ಮುಂತಾದ ವಿಶೇಷ ಸೌಲಭ್ಯಗಳು ಕೂಡಿವೆ. ಸಾರಿಗೆ ಸೌಲಭ್ಯಗಳಾದ ಬಸ್ ಡಿಪೋ, ಟರ್ಮಿನಲ್, ಮುಂತಾದವುಗಳನ್ನು ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್. ಮತ್ತು ವಾ.ಕ.ರ.ಸಾ.ಗಳ ಮೇಲ್ದರ್ಜೆ ಮಟ್ಟದಾಗಿರುತ್ತದೆ. ಮಾರ್ಗ ಬದಲಾವಣೆ ಸೌಲಭ್ಯವನ್ನು (ಇಂಟರ್ ಚೇಂಜ್ ಸೌಲಭ್ಯ) ಅಭಿವೃದ್ಧಿ ಪಡೆಸಲಾಗುತ್ತಿದ್ದು, ಇದರಿಂದ ನಗರ ಸೇವೆಗಳಿಂದ ಬಿ.ಆರ್.ಟಿ. ಹಾಗೂ ಬಿ.ಆರ್.ಟಿ ಯಿಂದ ಇತರೆ ಸೇವೆಗಳಿಗೆ ವರ್ಗಾಯಿಸಿಕೊಳ್ಳಲು ಉಭಯ ನಗರ ಸೇವೆಗಳೊಂದಿಗೆ ಪೂರಕವಾದ ವ್ಯವಸ್ಥೆ ಅಳವಡಿಸಲಾಗುವುದು.

ಹುಬ್ಬಳ್ಳಿ ಮತ್ತು ಧಾರವಾಡಗಳಲ್ಲಿ ವಾಹನಗಳ ಸಂಖ್ಯೆ ವಾರ್ಷಿಕವಾಗಿ ಶೇ 14% ರಷ್ಟು ಹೆಚ್ಚಳವಾಗುತ್ತಿದೆ. ಇಂತಹ ವಾಹನಗಳ ಹೆಚ್ಚಳದಿಂದ ವಾಯು ಗುಣಮಟ್ಟದ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ. ಸುಸ್ಥಿರ ನಗರ ಸಾರಿಗೆ ವ್ಯವಸ್ಥೆಯ ಸಾರ್ವಜನಿಕ ಸಾರಿಗೆ ಒದಗಿಸುವುದೇ ಈ ದಿನಗಳಲ್ಲಿ ಹೆಚ್ಚು ಸೂಕ್ತವಾಗಿದೆ. ಪ್ರತಿಯೊಬ್ಬರು ಈ ಬಗ್ಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಯೋಚಿಸಬಹುದಾಗಿದೆ. ಇತರೆ ನಗರಗಳಲ್ಲಿನ ಅನುಭವದಂತೆ ಫ್ಲೈ ಓವರ್ ನಿರ್ಮಾಣ ತಾತ್ಕಾಲಿಕ ಉತ್ತಮ ಪರಿಹಾರವಾಗಿರುತ್ತದೆ. ಹುಬ್ಬಳ್ಳಿ-ಧಾರವಾಡ ನಗರಗಳ ಮಧ್ಯೆ ಸಂಚರಿಸುವ ಒಟ್ಟು ವಾಹನಗಳ ಸಂಖ್ಯೆಯಲ್ಲಿ ಶೇ 7% ರಷ್ಟು ಮಾತ್ರ ಬಸ್ ಗಳಾಗಿರುತ್ತದೆ. ಆದರೆ ಅವಳಿನಗರಗಳ ಮಧ್ಯೆ ಪ್ರಯಾಣ ಮಾಡುತ್ತಿರುವ ಒಟ್ಟು ಪ್ರಯಾಣಿಕರಲ್ಲಿ ಶೇ. 70% ರಷ್ಟು ಪ್ರಯಾಣಿಕರು ಬಸ್ ಮೂಲಕ ಪ್ರಯಾಣಿಸುತ್ತಾರೆ. ಅಧ್ಯಯನದಂತೆ ಹುಬ್ಬಳ್ಳಿ-ಧಾರವಾಡ ಮಧ್ಯೆ ಸುರಕ್ಷಿತ ಅನುಕೂಲಕರ ಸಾರಿಗೆ ಕಾರಿಡಾರ್ ಅಭಿವೃದ್ಧಿಪಡಿಸುವುದರಿಂದ ಸಾರ್ವಜನಿಕರಿಗೆ ಉತ್ತಮ ಸೌಲಭ್ಯವುಳ್ಳ ಸಾರಿಗೆ ವ್ಯವಸ್ಥೆ ನೀಡುವುದೇ ಉತ್ತಮ ಮಾರ್ಗೋಪಾಯವೆಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಇದರಿಂದ ಸಾರಿಗೆಯಲ್ಲಾಗುವ ವ್ಯತಿರಿಕ್ತ ಪರಿಣಾಮಗಳನ್ನು ತಗ್ಗಿಸಲು ಸಾಧ್ಯವಾಗುತ್ತದೆ.

ಚತುಷ್ಪಥ ರಸ್ತೆಯನ್ನು ಸೀಮಿತಗೊಳಿಸಲು ರಸ್ತೆ ಅಗಲೀಕರಣಗೊಳಿಸಿದ್ದಾಗ್ಯೂ ರಸ್ತೆಗೆ ಬರುವ ವಾಹನ ಸಂಖ್ಯೆ ಹೆಚ್ಚಳದಿಂದಾಗುವ ಪರಿಣಾಮಗಳ ಬಗ್ಗೆ ತುರ್ತು ವ್ಯವಸ್ಥೆಯಾಗುತ್ತದೆಯೇ ಹೊರತು ಶಾಶ್ವತ ಪರಿಹಾರವಾಗುವುದಿಲ್ಲ. ಬಿ.ಆರ್.ಟಿ.ಎಸ್. ನಿಂದ ಮಾತ್ರ ಅವಳಿನಗರಗಳಿಗೆ ಬಹುಕಾಲದ ವರೆಗಿನ ಸುಸ್ಥಿರ ಸಾರಿಗೆ ವ್ಯವಸ್ಥೆ ನೀಡುವುದು ಸ್ಪಷ್ಟವಾಗುತ್ತದೆ.

ಹುಬ್ಬಳ್ಳಿ-ಧಾರವಾಡ ಮಧ್ಯೆ ಬಸ್ ಮೂಲಕ (ರಸ್ತೆ ಅವಲಂಬನೆ) ಸಾರಿಗೆ ವ್ಯವಸ್ಥೆ ಹೆಚ್ಚು ಸುಸ್ಥಿರವಾಗಿರುವುದರಿಂದ ಗ್ರಾಮಾಂತರ ರೈಲು ಸಾಗಾಣಿಕೆ ಇಲ್ಲಿ ಗೌಣವಾಗಿದೆ. ಪ್ರಸ್ತುತ ಹುಬ್ಬಳ್ಳಿ-ಧಾರವಾಡ ಮಧ್ಯದಲ್ಲಿರುವ ರೈಲು ಮಾರ್ಗ ಎರಡು ಮಾರ್ಗ ಮಾಡುವುದಾಗಲಿ, ವಿದ್ಯುತೀಕರಣಗೊಳಿಸುವುದು, ಉಪ ನಗರ ರೈಲು ಕಾರ್ಯಗತಗೊಳಿಸಲು ಭೂಸ್ವಾಧೀನಪಡಿಸುವುದು ಅವಶ್ಯವಾಗಿರುತ್ತದೆ. ಇದು ಬಿ.ಆರ್.ಟಿ.ಎಸ್. ಗಿಂತ ಹೆಚ್ಚು ವೆಚ್ಚದಾಯಕವಾಗಿದೆ. ಅಲ್ಲದೆ ಮಾಹಿತಿಯಂತೆ ಕೇಂದ್ರ ರೈಲ್ವೆ ಇಲಾಖೆಯಲ್ಲಿ ಅವಳಿ ನಗರಗಳ ಮಧ್ಯೆ ಸುಸ್ಥಿರ ರೈಲು ಸಾರಿಗೆ ಬಗ್ಗೆ ಯಾವುದೇ ಯೋಜನೆ ಇರುವುದಿಲ್ಲ. ಈಗಾಗಲೇ ನಿಮಿಷಕ್ಕೊಂದರಂತೆ ಬಸ್ ಸಾರಿಗೆ ವ್ಯವಸ್ಥೆ ಜಾರಿಯಲ್ಲಿದ್ದು ಇದನ್ನು ರೈಲು ಸಾರಿಗೆ ವ್ಯವಸ್ಥೆಯಲ್ಲಿ ಕಾರ್ಯಗತಗೊಳಿಸುವುದು ಸಾಧ್ಯವಾಗುವುದಿಲ್ಲ. ಬಸ್ ವ್ಯವಸ್ಥೆಯಿಂದ ಕಲ್ಪಿಸಬಹುದಾದ ಉತ್ತಮ ಸಂಪರ್ಕ ರೈಲು ವ್ಯವಸ್ಥೆಯಿಂದ ಒದಗಿಸಲು ಕಷ್ಟಕರ.

ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್. ಯೋಜನೆಯ ಕರಡು ಯೋಜನಾ ವರದಿಯ ಹಂತದಲ್ಲಿ ಪ್ರಯಾಣದ ಲಕ್ಷಣಗಳನ್ನು ತಿಳಿಯಲು ಹಲವು ಸಂಚಾರ ಸಮೀಕ್ಷೆಗಳನ್ನು ನಡೆಸಲಾಗಿದೆ. ಹುಬ್ಬಳ್ಳಿ-ಧಾರವಾಡ ನಗರಗಳ ಮಧ್ಯೆ ಪ್ರಯಾಣಿಸುತ್ತಿರುವ ಒಟ್ಟು ಪ್ರಯಾಣಿಕರಲ್ಲಿ ಶೇ 50% ರಷ್ಟು ಪ್ರಯಾಣಿಕರು ಹುಬ್ಬಳ್ಳಿ ನಗರಕ್ಕೆ ಅಥವಾ ಧಾರವಾಡ ನಗರಕ್ಕೆ ಪ್ರಯಾಣಿಸುತ್ತಾರೆ. ನವನಗರವು ಕೂಡ ಒಂದು ಮುಖ್ಯ ನಿಲ್ದಾಣವಾಗಿರುತ್ತದೆ. ಮುಂಬರುವ ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡಗಳ ನಡುವೆ ಗಮನಾರ್ಹವಾದ ನಗರಾಭಿವೃದ್ದಿಯನ್ನು ನಿರೀಕ್ಷಿಸಲಾಗಿದೆ. ವಾಕರಸಾ ಸಂಸ್ಥೆಯು ಹುಬ್ಬಳ್ಳಿ-ಧಾರವಾಡ ನಗರಗಳ ಮಧ್ಯೆ ಸಾಮಾನ್ಯ ಸೇವೆಗಳು ಮತ್ತು ಲಿಮಿಟೆಡ್ ಎಕ್ಸ್ ಪ್ರೆಸ್ ಸೇವೆಗಳನ್ನು ಒದಗಿಸುತ್ತಿದೆ. ಬಿ.ಆರ್.ಟಿ.ಎಸ್ ಯೋಜನೆಯು ವಿವಿಧ ಪ್ರಯಾಣಿಕರ ವರ್ಗಗಳ ಅವಶ್ಯಕತೆಗಳನ್ನು ಪೂರೈಸಬೇಕಾಗಿದ್ದು, ಎಕ್ಸ್ ಪ್ರೆಸ್ ಸೇವೆಗಳನ್ನು ಮತ್ತು ಲಿಮಿಟೆಡ್ ಎಕ್ಸ್ ಪ್ರೆಸ್ ಸೇವೆಗಳನ್ನು ಒಳಗೊಂಡಿರಬೇಕಾಗಿರುತ್ತದೆ. ಆದ್ದರಿಂದ ಎಕ್ಸ್ ಪ್ರೆಸ್ ಸೇವೆ ಮತ್ತು ಲಿಮಿಟೆಡ್ ಎಕ್ಸ್ ಪ್ರೆಸ್ ಸೇವೆಗಳು ಸಾಮಾನ್ಯ ಸೇವೆಗಳನ್ನು ಓವರ್ ಟೇಕ್ ಮಾಡುವ ಉದ್ದೇಶಕ್ಕಾಗಿ ಓವರ್ ಟೇಕಿಂಗ್ ಪಥವನ್ನು ನಿರ್ಮಿಸಲಾಗುವುದು.

ಬಿ.ಆರ್.ಟಿ.ಎಸ್. ಕಾರಿಡಾರ್ ಗೆ ಎರಡು ಪ್ರತ್ಯೇಕ ಕ್ರಾಸ್ ಸೆಕ್ಷನ್ ಗಳನ್ನು ಪ್ರಸ್ತಾಪಿಸಲಾಗಿದೆ. ಹುಬ್ಬಳ್ಳಿ ನವೀನ ಹೋಟೆಲ್ ನಿಂದ ಧಾರವಾಡ ಗಾಂಧಿನಗರ ವೃತ್ತದವರೆಗೆ 44 ಮೀ ಅಗಲವುಳ್ಳ ರಸ್ತೆ, ನವೀನ ಹೋಟೆಲ್ ಹುಬ್ಬಳ್ಳಿಯಿಂದ ಹೊಸೂರು ವೃತ್ತ ಹುಬ್ಬಳ್ಳಿ ಮತ್ತು ಗಾಂಧಿನಗರ ವೃತ್ತ ಧಾರವಾಡದಿಂದ ಜುಬಲಿ ವೃತ್ತ ಧಾರವಾಡದವರೆಗೆ 35 ಮೀ ಅಗಲವುಳ್ಳ ರಸ್ತೆ ಪ್ರಸ್ತಾಪಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಯೋಜನೆಯ ಪರಿಣಾಮವನ್ನು ಕಡಿಮೆಗೊಳಿಸಲು ಹೆಚ್ಚು ಸಾಂದ್ರತೆಯುಳ್ಳ ನಗರ ಪ್ರದೇಶಗಳಲ್ಲಿ 44 ಮೀ ಅಗಲ ರಸ್ತೆ ಅನಿವಾರ್ಯವಾಗಿದ್ದಾಗ್ಯೂ 35 ಮೀ ಗೆ ಕಡಿತಗೊಳಿಸಿದೆ. ರಸ್ತೆಯ ಅಗಲವನ್ನು 35 ಮೀ ಕ್ಕಿಂತ ಕಡಿಮೆಗೊಳಿಸುವುದು ಸಾಧ್ಯವಿರುವುದಿಲ್ಲ.

ಬಿ.ಆರ್.ಟಿ.ಎಸ್ ಸಮೂಹ ಸಾರಿಗೆ ವ್ಯವಸ್ಥೆಯಾಗಿದ್ದು ಬಸ್ ಶೀಘ್ರವಾಗಿ ಚಲಿಸುವುದರಿಂದ ಪ್ರಯಾಣಿಕರಿಗೆ ಪ್ರಯಾಣದ ಸಮಯ ಕಡಿಮೆಯಾಗಲಿದೆ. ಬಿ.ಆರ್.ಟಿ.ಎಸ್ ಬಸ್ ಗಳು ಮಿಶ್ರ ವಾಹನ ಪಥಗಳಲ್ಲಿ ಸಂಚರಿಸುವುದು ಸೂಕ್ತವಾಗಿರುವುದಿಲ್ಲ. ಇತರೆ ಮಾರ್ಗದಲ್ಲಿ ಬಿ.ಆರ್.ಟಿ.ಎಸ್ ಬಸ್ ಗಳು ಸಂಚರಿಸುವುದರಿಂದ ಬಸ್ ಗಳ ವೇಗವಲ್ಲದೇ ಇತರ ವಾಹನಗಳ ವೇಗವು ಕಡಿಮೆಯಾಗುತ್ತದೆ. ಬಿ.ಆರ್.ಟಿ.ಎಸ್ ಬಸ್ ಗಳು ಮಿಶ್ರ ವಾಹನ ಸಂಚಾರದಲ್ಲಿ ಸಂಚರಿಸುವುದರಿಂದ ಬಸ್ ಗಳ ವಿಳಂಬಕ್ಕೆ ಅವಕಾಶವಾಗುತ್ತದೆ. ಇದರಿಂದ ತ್ವರಿತ ಸಾರ್ವಜನಿಕ ಸಾರಿಗೆ ಆಶಾದಾಯಕ ಸೇವೆಗೆ ಸೋಲುಂಟಾಗುತ್ತದೆ. ಬಿ.ಆರ್.ಟಿ.ಎಸ್ ಬಸ್ ಗಳಿಗಾಗಿ ಪ್ರತ್ಯೇಕ ಪಥಗಳನ್ನು ಮೀಸಲಿಡುವುದರಿಂದ ಕೇವಲ ಬಸ್ ಗಳಿಗಾಗಿ ಮಾತ್ರವಲ್ಲದೆ, ಇತರೆ ಮಿಶ್ರ ಸಂಚಾರಕ್ಕೂ ಉಪಯುಕ್ತವಾಗಿರುತ್ತದೆ.

ಯೋಜನೆಯ ಭೂಸ್ವಾಧೀನ ಹಾಗೂ ಪುನರ್ವಸತಿ ಮತ್ತು ಪುನರ್ ನಿರ್ಮಾಣಕ್ಕಾಗಿ ಅಂದಾಜು ರೂ. 692.00 ಕೋಟಿಗಳ ಅಂದಾಜು ವೆಚ್ಚ ತಗುಲಬಹುದಾಗಿದೆ. ಅಂದಾಜು 55 ಮಿಲಿಯನ್ ಅಮೆರಿಕನ್ ಡಾಲರ್ ಮತ್ತು ಎಸ್.ಯು.ಟಿ.ಪಿ ಯಿಂದ 1.9 ಮಿಲಿಯನ್ ಅಮೆರಿಕನ್ ಡಾಲರ್ ಅನುದಾನ ಲಭ್ಯವಿದೆ.

ಬಿ.ಆರ್.ಟಿ ಕಾರಿಡಾರನ ಎರಡು ಕಡೆ ಚತುಷ್ಪಥ ರಸ್ತೆಯನ್ನು, ಎರಡು ಮಿಶ್ರ ಸಂಚಾರ ಪಥಗಳನ್ನು ಕಲ್ಪಿಸಲಾಗಿದೆ. ಈ ಉದ್ದೇಶಕ್ಕೆ 63 ಎಕರೆಯಷ್ಟು ಜಮೀನು ಅವಶ್ಯವಾಗಿದೆ. ಕರ್ನಾಟಕ ಹೆದ್ದಾರಿ ಕಾಯಿದೆಯನ್ವಯ ಭೂಸ್ವಾಧೀನ ಪ್ರಸ್ತಾಪಿಸಲಾಗಿದೆ. ಅಧಿನಿಯಮ 15 ರಡಿ ಮುಖ್ಯ ಅಭಿಯಂತರರು ಕೆ.ಆರ್.ಡಿ.ಸಿ.ಎಲ್. ಇವರು ಸ್ವಾಧೀನ ಪ್ರಾಧಿಕಾರಿಯಾಗಿರುತ್ತಾರೆ. ಅದರಂತೆ ಕರ್ನಾಟಕ ಹೆದ್ದಾರಿ ಕಾಯಿದೆಯನ್ವಯ ಯು/ಎಸ್ 15ರಂತೆ ದಿನಾಂಕ: 21-11-2012 ಮತ್ತು 31-12-2012 ರ ದಿನಪತ್ರಿಕೆಗಳಲ್ಲಿ ಪ್ರಕಟಿಸಲಾಗಿದೆ.

ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್. ಯೋಜನೆಯ ಭಾಗವಾಗಿ ಯೋಜನೆಯಿಂದ ಬಾಧಿತರಾಗುವ ಕುಟುಂಬಗಳಿಗೆ ಪುನರ್ವಸತಿ ಸೌಲಭ್ಯಗಳನ್ನು ಒದಗಿಸುವ ಕುರಿತು ಕ್ರಿಯಾಯೋಜನೆಯನ್ನು ತಯಾರಿಸಲಾಗಿದೆ. ಯೋಜನೆಯನ್ನು ಕಾರ್ಯಗತಗೊಳಿಸುವಾಗ ಪುನರ್ವಸತಿ ಉದ್ದೇಶವನ್ನು ಸಮರ್ಪಕವಾಗಿ ಜಾರಿಗೊಳಿಸಲು ಆದ್ಯ ಗಮನ ಹರಿಸಲಾಗಿದೆ.

ಆಸ್ತಿಗಳನ್ನು ಕಳೆದುಕೊಳ್ಳುವ ವ್ಯಕ್ತಿಗಳ ಬಗ್ಗೆ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಆಧಾರದ ಮೇಲೆ ಆಸ್ತಿ ಕಳೆದುಕೊಳ್ಳುವ ವ್ಯಕ್ತಿಗಳ ಆಸ್ತಿಯ ಸರ್ವೇ ನಂಬರ್/ಆಸ್ತಿಯ ನಂಬರನ್ನು ತೆಗೆದುಕೊಂಡು ಸದರಿ ವ್ಯಕ್ತಿಯ ಎಷ್ಟು ಆಸ್ತಿಯನ್ನು ಭೂ ಸ್ವಾಧೀನಕ್ಕೆ ಒಳಪಡಿಸಬೇಕು ಎಂಬುದನ್ನು ಗುರುತಿಸುವುದು. ಅದೇ ರೀತಿ ಬಿ.ಆರ್.ಟಿ.ಎಸ್. ಯೋಜನೆಯಲ್ಲಿ ಮೊದಲಿಗೆ ಸಾಮಾಜಿಕ, ಆರ್ಥಿಕ ಸಮೀಕ್ಷೆಯ ಮೂಲಕ ಯೋಜನೆಯಲ್ಲಿ ಬಾಧಿತರಾಗುವ ವಿವಿಧ ವರ್ಗದವರನ್ನು ಗುರುತಿಸಲಾಗುವುದು. ಜೊತೆಗೆ ವೀಡಿಯೋ ಚಿತ್ರೀಕರಣವನ್ನು ತೆಗೆದುಕೊಳ್ಳಲಾಗಿದೆ. ಆಸ್ತಿ ಕಳೆದುಕೊಳ್ಳುವ ವ್ಯಕ್ತಿಗಳಿಗೆ ಸಮ್ಮತಿ/ಸಂಧಾನ ಮಾತುಕತೆಯ ಮೂಲಕ ಪರಿಹಾರ ದರವನ್ನು ನಿರ್ಧರಿಸಲಾಗುವುದು. ಈ ದರ ನಿಗದಿಪಡಿಸುವ ಸಂಧಾನ ಸಮತಿಯನ್ನು ಜಿಲ್ಲಾಧಿಕಾರಿಗಳು, ಧಾರವಾಡ ಇವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ.

ಭೂಮಿಯನ್ನು/ಆಸ್ತಿಯನ್ನು ಹಾಗೂ ಇತರೆ ಹಾನಿಗೊಳಗಾಗುವ ಕಟ್ಟಡಗಳಿಗೆ ಪರಿಹಾರ ಧನವನ್ನು ನೀಡುವ ಸಲುವಾಗಿ ಪುನರ್ ವಸತಿ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದೆ. ಅದರಂತೆ ಸಮ್ಮತಿ ಆಧಾರದ ಮೇಲೆ ಲೋಕೋಪಯೋಗಿ ಇಲಾಖೆಯು ನಿರ್ಧರಿಸುವ ಪ್ರಸ್ತುತ ನಿಗದಿತ ದರ ಆಧಾರದ ಮೇಲೆ ಕಟ್ಟಡದ ಹಾನಿಯನ್ನು ಅಂದಾಜಿಸಲಾಗುವುದು. ಹಾಗೂ ಪುನರ್ ವಸತಿ ಕ್ರಿಯಾ ಯೋಜನೆಯಂತೆ ಸಿಗುವ ಸೌಲಭ್ಯಗಳ ವಿವರ ಈ ಕೆಳಗಿನಂತಿದೆ.

ಭೂಮಿ/ಕಟ್ಟಡ ಕಳೆದುಕೊಳ್ಳುವವರಿಗೆ:

Cಸಂಧಾನ ಸಮಿತಿಯ ನಿರ್ಧಾರಿತ ಪರಿಹಾರ ಧನ.

ಲೋಕೋಪಯೋಗಿ ಇಲಾಖೆಯು ನೀಡುವ ಮೌಲ್ಯಮಾಪನ ವರದಿಯಂತೆ ಚಾಲ್ತಿ ನಿಗದಿತ ದರ ಆಧಾರದ ಕಟ್ಟಡದ ಮಾಲೀಕರಿಗೆ ಪರಿಹಾರ (ಸವಕಳಿ ಇಲ್ಲದೆ) ನೀಡಲಾಗುವುದು.

ಭಾಗಶಃ ತೊಂದರೆಗೊಳಗಾದ ಕಟ್ಟಡಗಳನ್ನು (ಭಾಗಶಃ ಪರಿಣಾಮ) ಪುನರ್ನಿರ್ಮಿಸಲು ಶೇ 25% ಹೆಚ್ಚುವರಿ ಪರಿಹಾರ ನೀಡಲಾಗುವುದು.

ಬೆಳೆ/ಮರಗಳ ಹಾನಿಯ ಕುರಿತಂತೆ ಸಂಬಂಧಿಸಿದ ಇಲಾಖೆಗಳು ಅಂದಾಜಿಸಿದಂತೆ ಪರಿಹಾರ ನೀಡಲಾಗುವುದು

ಸಂಧಾನ ಸಮತಿಯಲ್ಲಿ ನಿರ್ಧಾರವಾಗುವ ಮೊತ್ತದ ಮುದ್ರಾಂಕ ಶುಲ್ಕ ಹಾಗೂ ನೋಂದಣಿ ದರಗಳ ವಿನಾಯಿತಿ ಇರುತ್ತದೆ.

ಸಾರ್ವಜನಿಕ ರಸ್ತೆಯ ಬದಿಯ ಕಟ್ಟಡದ ಮಾಲೀಕನು ರಸ್ತೆಯ ಜಾಗವನ್ನು ಅತೀಕ್ರಮಣ ಮಾಡಿದ್ದಲ್ಲಿ, ಅತಿಕ್ರಮಣ ಮಾಡಿರುವ ಭಾಗಕ್ಕೆ ಮಾತ್ರ ಲೋಕೋಪಯೋಗಿ ಇಲಾಖೆಯಿಂದ ನಿರ್ಧರಿಸಲ್ಪಟ್ಟ ದರ ಪಟ್ಟಿಯ ಪ್ರಕಾರ ಎಕ್ಸ್ ಗ್ರೇಷಿಯಾ ವನ್ನು ನೀಡಲಾಗುವುದು.

ಆದಾಯ ಉತ್ಪನ್ನ ಚಟುವಟಿಕೆಯ ತರಬೇತಿ. (ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ) ನೀಡಲಾಗುವುದು.


ಬಾಡಿಗೆದಾರರಿಗೆ:

6 ತಿಂಗಳ ಅಂಗಡಿ ಬಾಡಿಗೆ ಭತ್ಯೆ (ಪ್ರತಿ ತಿಂಗಳಿಗೆ ರೂ. 1,800 ರಂತೆ).

6 ತಿಂಗಳ ಮನೆ ಬಾಡಿಗೆ ಭತ್ಯೆ (ಪ್ರತಿ ತಿಂಗಳಿಗೆ ರೂ. 1,200 ರಂತೆ).

ವಸ್ತುಗಳ ಸ್ಥಳಾಂತರಿಸಲು ಸಾಗಾಣಿಕೆ ಭತ್ಯೆ ರೂ. 5,000/-.

ಜೀವನಾಧಾರ ಭತ್ಯೆ ರೂ. 15,000/-.

ಆದಾಯ ಉತ್ಪನ್ನ ಚಟುವಟಿಕೆಯ ತರಬೇತಿ (ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ).


ಅನಧೀಕೃತ ವಾಸಿಗಳು:

ವಸ್ತುಗಳ ಸ್ಥಳಾಂತರಿಸಲು ಸಾಗಾಣಿಕೆ ಭತ್ಯೆ ರೂ. 5,000/-

ಆದಾಯ ಉತ್ಪನ್ನ ಚಟುವಟಿಕೆಯ ತರಬೇತಿ

ಜೀವನಾಧಾರ ಭತ್ಯೆ ರೂ. 15,000/-


ಅತಿಕ್ರಮಣ ವಾಸಿಗಳು:

ಸಾರ್ವಜನಿಕ ರಸ್ತೆಯ ಬದಿಯ ಕಟ್ಟಡದ ಮಾಲೀಕನು ರಸ್ತೆಯ ಜಾಗವನ್ನು ಅತಿಕ್ರಮಣ ಮಾಡಿದ್ದಲ್ಲಿ ಅತಿಕ್ರಮಣ ಮಾಡಿರುವ ಭಾಗಕ್ಕೆ ಮಾತ್ರ ಲೋಕೋಪಯೋಗಿ ಇಲಾಖೆಯಿಂದ ನಿರ್ಧರಿಸಲ್ಪಟ್ಟ ದರ ಪಟ್ಟಿಯ ಪ್ರಕಾರ ex-gratia ವನ್ನು ನೀಡಲಾಗುವುದು.


ಯೋಜನಾ ಬಾಧಿತರು ವ್ಯವಸ್ಥಾಪಕ ನಿರ್ದೇಶಕರು, ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್. ಕಂ ರವರಿಗೆ ದೂರು ನೀಡಬಹುದು. ಒಂದು ವೇಳೆ ವ್ಯವಸ್ಥಾಪಕ ನಿರ್ದೇಶಕರು ಸೂಕ್ತ ಪರಿಹಾರ ಒದಗಿಸದಿದ್ದಲ್ಲಿ ಕುಂದು ಕೊರತೆ ನಿವಾರಣಾ ಸಮಿತಿಗೆ ದೂರು ದಾಖಲಿಸಬಹುದು. ಕುಂದು ಕೊರತೆ ನಿವಾರಣಾ ಸಮಿತಿಯನ್ನು ಯೋಜನಾ ಬಾಧಿತರ ದೂರುಗಳನ್ನು ಆಲಿಸಲು ಅವನ್ನು ಪರಿಹರಿಸಲು ಸ್ಥಾಪಿಸಲಾಗಿದೆ. ಜಿಲ್ಲಾಧಿಕಾರಿ, ಧಾರವಾಡ ಕುಂದು ಕೊರತೆ ನಿವಾರಣಾ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಸಂಸ್ಥೆಯ ಸದಸ್ಯರಾಗಿದ್ದಾರೆ.

ಪ್ರಸ್ತುತ ಭೂಸ್ವಾಧೀನ ಪ್ರಕ್ರಿಯೆಯು ಮುಕ್ತಾಯ ಹಂತದಲ್ಲಿದ್ದು, ಒಟ್ಟು 72.29 ಎಕರೆಗಳಲ್ಲಿ ಈಗಾಗಲೇ 72 ಎಕರೆ ಭೂ ಸ್ವಾಧೀನವಾಗಿದೆ. ಹೀಗಾಗಿ ಹೆಚ್.ಡಿ.ಬಿ.ಆರ್.ಟಿ.ಎಸ್. ಯೋಜನೆಯು ಆದಷ್ಟು ಬೇಗ ಭೂಸ್ವಾಧೀನ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಿ ಪರಿಷ್ಕೃತ ಸಮಯದೊಳಗೆ ಯೋಜನೆಯನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.

ಬಸ್ ದರವನ್ನು ಈಗಿನ ಬಸ್ ದರಕ್ಕೆ ಹೋಲಿಸಿ, ಸಾರ್ವಜನಿಕರಿಗೆ ಕೈಗೆಟಕುವ ದರವನ್ನು ನಿಗಧಿಪಡಿಸುವಂತೆ ಉದ್ದೇಶಿಸಿದೆ ಮತ್ತು ಈಗಿರುವ ಬಸ್ ಪಾಸ್ ವ್ವವಸ್ಥೆ ಅಲ್ಲದೇ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ಸಹ ಕಾರ್ಯರೂಪಕ್ಕೆ ತರಲಾಗುವುದು.

ಬಿ.ಆರ್.ಟಿ.ಎಸ್.ಬಸ್ಗಳಲ್ಲಿ ಕಂಡಕ್ಟರ್ಗಳಿರುವುದಿಲ್ಲ ಬದಲಾಗಿ ಬಸ್ ನಿಲ್ದಾಣದಲ್ಲಿಯೇ ಟಕೇಟ್ ತೆಗೆದುಕೊಳ್ಳುವ ವ್ಯವಸ್ಥೆ ಇರುತ್ತದೆ. ಸ್ಮಾರ್ಟ ಕಾರ್ಡ್ನ್ನು ಬಳಸಿ ಸಹ ಪ್ರಯಾಣ ಮಾಡಬಹುದು. ಪ್ರತಿ ಬಸ್ ನಿಲ್ದಾಣದಲ್ಲಿಯೂ ಟಕೇಟ್ ಕೌಂಟರ್ ಇರುತ್ತದೆ.

ಇಲ್ಲ. ಏಕೆಂದರೆ ಅಂದಾಜು 30 ವರ್µಗಳ ನಗರ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ರೂಪಿಸಿದೆ. ಫ್ಲಾಯ್ ಓವರ್ ನಿರ್ಮಿಸಿದರೆ ನಗರ ಬೆಳವಣಿಗೆಗೆ ಅಡ್ಡಿ ಉಂಟಾಗಬಹುದು ಎನ್ನುವ ಉದ್ದೇಶದಿಂದ ಮೂಲ ನಕ್ಷೆಯಂತೆ ಯೋಜನೆಯನ್ನು ಅನುಷ್ಟಾನ ಮಾಡಲಾಗುತ್ತಿದೆ.

ಭೂ ಸ್ವಾಧೀನ ಪ್ರಕ್ರಿಯೆಯು ಮುಗಿಯುವ ಹಂತದಲ್ಲಿದ್ದು, ಒಟ್ಟು 72.29 ಎಕರೆಗಳಲ್ಲಿ ಈಗಾಗಲೇ 72 ಎಕರೆ ಭೂ ಸ್ವಾಧೀನವಾಗಿದೆ. ಎಲ್ಲಾ ಗ್ರಾಮ ಮತ್ತು ನಗರ ಪ್ರದೇಶಗಳ ಭೂ ಬೆಲೆ ನಿಗದಿ ಮಾಡುವ ಸಭೆಗಳು ಮುಕ್ತಾಯವಾಗಿವೆ. ಧಾರವಾಡ ನಗರ ಹಾಗೂ ನವಲೂರು ಗ್ರಾಮದ ಭೂ ದರವು ನಿಗದಿಯಾಗಿದ್ದು, ಸರ್ಕಾರದಿಂದ ಅನುಮೋದನೆಯಾಗಿದೆ. ಅಮರಗೋಳ, ರಾಯಪೂರ, ಸತ್ತೂರು, ಉಣಕಲ್ ವಲಯ 4 ಮತ್ತು 5 ರಲ್ಲಿ ಪರಿಹಾರ ಧನ ವಿತರಿಸಲಾಗಿದೆ. ಹುಬ್ಬಳ್ಳಿ, ಧಾರವಾಡ, ಲಕ್ಕಮ್ಮನಹಳ್ಳಿ, ನವಲೂರು, ಭೈರಿದೇವರಕೊಪ್ಪ, ಉಣಕಲ್ಗಳಿಗೆ ಪರಿಹಾರ ಧನ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ.

ಬಿ.ಆರ್.ಟಿ.ಎಸ್ ಬಸ್ಗಳನ್ನು ಕೆ.ಎಸ್.ಆರ್.ಟಿ.ಸಿ ಸಂಸ್ಥೆಯು ನಿರ್ವಹಿಸುತ್ತದೆ.

ಬಿ.ಆರ್.ಟಿ.ಎಸ್ ಬಸ್ಗಳನ್ನು ಕೆ.ಎಸ್.ಆರ್.ಟಿ.ಸಿ ಸಂಸ್ಥೆಯು ನಿರ್ವಹಿಸುತ್ತದೆ.

ಧಾರವಾಡದಲ್ಲಿ ಹೆಚ್.ಡಿ.ಬಿ.ಆರ್.ಟಿ.ಎಸ್. ಟರ್ಮಿನಲ್ ಕಾರ್ಪೋರೇಷನ್ ಎದುರುಗಡೆ ಇರುವ ಮಿತ್ರ ಸಮಾಜ ಜಾಗದಲ್ಲಿ ನಿರ್ಮಿಸಲಾಗುವುದು.

ಅವಳಿ ನಗರಗಳ ಮಧ್ಯ ಇನ್ನು ಮುಂದೆ 12 ಮೀಟರ್ ಉದ್ದದ 100 ವೋಲ್ವೋ ಕಂಪನಿಯ ಬಸ್ಗಳು ಮತ್ತು ಮತ್ತು 18 ಮೀಟರ್ ಉದ್ದದ 30 ಟಾಟಾ ಕಂಪನಿಯ ಆರ್ಟಕ್ಯುಲೇಟೆಡ್ ಬಸ್ಗಳು ಸಂಚರಿಸಲಿವೆ. ಈ ಬಸ್ಗಳು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಸಾರ್ವಜನಿಕ ಸಾರಿಗೆಯಲ್ಲೇ ವಿಶಿಷ್ಟವಾಗಿರುತ್ತವೆ. ಈ ಬಸ್ಗಳು ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಕೇವಲ 72 ಡಿಸೇಬಲ್ ಶಬ್ದವನ್ನು ಸೂಸುತ್ತವೆ. ಯಾವ ಬಸ್ ಯಾವ ಸಮಯಕ್ಕೆ ಎಲ್ಲಿರಲಿದೆ ಎಂಬುದನ್ನು ತಿಳಿಯಲು ವೆಹಿಕಲ್ ಲೋಕೆಶನ್ ಮಾನಿಟರ್ ಅಳವಡಿಸಲಾಗುವುದು.

ಪಾದಚಾರಿ ಮೇಲ್ಸೆತುವೆಗಳನ್ನು ಜನನಿಬಿಡ ಸ್ಥಳಗಳಲ್ಲಿ ಮಾತ್ರ ನಿರ್ಮಿಸಲು ಯೋಜಿಸಲಾಗಿದೆ. ಒಟ್ಟು 7 ಕಡೆ ಪಾದಚಾರಿ ಮೇಲ್ಸೆತುವೆಗಳನ್ನು ನಿರ್ಮಿಸಲಾಗುವುದು. ಅವುಗಳೆಂದರೆ ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಸರ್ಕಲ್, ಉಣಕಲ್ ಕೆರೆ, ನವನಗರ, ರಾಯಾಪೂರ, ಎಸ್.ಡಿ.ಎಂ. ಆಸ್ಪತ್ರೆ, ಪ್ರೇರಣಾ ಕಾಲೇಜು, ಮತ್ತು ಹೊಸೂರ ಇಂಟರ್ಚೇಂಜ್ನ ಸ್ಥಳಗಳಲ್ಲಿ ಪಾದಚಾರಿ ಮೇಲ್ಸೆತುವೆಗಳನ್ನು ನಿರ್ಮಿಸಲಾಗುವುದು. ಇವುಗಳು ಪಾದಚಾರಿಗಳಿಗೆ ರಸ್ತೆ ದಾಟಲು ಅನುಕೂಲ ಒದಗಿಸುತ್ತವೆ. ಮತ್ತು ಇಲ್ಲಿ ಮೆಟ್ಟಿಲುಗಳಿರದೆ, ರ್ಯಾಂಪಗಳಿರುವುದರಿಂದ ಜನರು ಆರಾಮಾಗಿ ನಡೆದು ಹೋಗಬಹುದು. ಅಲ್ಲದೇ ವಯಸ್ಸಾದವರಿಗೆ ಮತ್ತು ಅನಾರೋಗ್ಯ ಪೀಡಿತರಿಗೆ, ಅಂಗವಿಕಲರಿಗೆ ಮೇಲೆ ಹತ್ತಲು ಲಿಫ್ಟಗಳನ್ನು ಒದಗಿಸಲಾಗುವುದು.

ಹೌದು. ಪ್ರತಿಯೊಂದು ಗ್ರಾಮದ ಹಾಗೂ ನಿಲುಗಡೆಯ ಬಳಿಯೂ ಪಾದಚಾರಿ ರಸ್ತೆ ದಾಟುವಿಕೆಯ ಬಗ್ಗೆ ಆದ್ಯ ಗಮನ ಹರಿಸಲಾಗಿದ್ದು, ಇದರ ಜೊತೆಗೆ ಪಾದಚಾರಿಗಳ ಮೇಲ್ಸೆತುವೆಯನ್ನು ನಿರ್ಮಿಸಲಾಗುತ್ತಿದೆ. ಇಂತಹ ಸ್ಥಳಗಳಲ್ಲಿ ಸಮತಟ್ಟಾದ ಮತ್ತು ಅಗಲವಾದ ರಸ್ತೆ ದಾಟುಗಳನ್ನು ನಿರ್ಮಾಣ ಮಾಡಲಾಗುತ್ತದೆ ಅಲ್ಲದೆ ಅದಕ್ಕೂ ಮೊದಲು ವೇಗ ನಿಯಂತ್ರಣ ರಸ್ತೆ ತಡೆಗಳನ್ನು (Sಠಿeeಜ ಃಡಿeಚಿಞ) ಅಳವಡಿಸಲಾಗುತ್ತಿದೆ. ಇದರಿಂದ ವಾಹನಗಳ ವೇಗ ನಿಯಂತ್ರಿಸಬಹುದಾಗಿದ್ದು ಹೆಚ್.ಡಿ.ಬಿ.ಆರ್.ಟಿ.ಎಸ್ ನಿಲ್ದಾಣಕ್ಕೆ ಸುರಕ್ಷಿತವಾಗಿ ತಲುಪಲು ಸಹಾಯಕವಾಗುತ್ತದೆ. ಎಲ್ಲಾ ನಿಲ್ದಾಣಗಳಿಗೆ ಹೋಗುವಲ್ಲಿ ಜೀಬ್ರಾ ದಾಟುವಿಕೆಯ ವಿನ್ಯಾಸದ ಬಣ್ಣ ಬಳಿಯಲಾಗುತ್ತದೆ. ಸಾರ್ವಜನಿಕ ವಾಹನಗಳು ತಪ್ಪಿಯೂ ಮಿಶ್ರ ಸಂಚಾರ ಕಾರಿಡಾರ್ನ್ನು ದಾಟಿ ಬಿ.ಆರ್.ಟಿ.ಎಸ್ ಕಾರಿಡಾರ್ಗೆ ಬರದಂತೆ ತಡೆ ಗೋಡೆ (ಖಚಿiಟ ಃಚಿಡಿಡಿiಛಿಚಿಜiಟಿg) ನಿರ್ಮಿಸಲಾಗುತ್ತಿದ್ದು ಈ ಸುರಕ್ಷತಾ ಕ್ರಮದಿಂದ ಬಸ್ ಪ್ರಯಾಣಿಕರು ಬಿ.ಆರ್.ಟಿ.ಎಸ್ ಬಸ್ ನಿಲ್ದಾಣದಿಂದ ಪಾದಚಾರಿ ಮಾರ್ಗ ತಲುಪಲು ಅನುಕೂಲವಾಗವಾಗುತ್ತದೆ.

ಈಗಾಗಲೇ ದೇಶಾದ್ಯಂತ ರಸ್ತೆ ಕೆಳಸೇತುವೆ (Subತಿಚಿಥಿs) ನಿರ್ಮಾಣದ ಕಾರ್ಯವೈಖರಿ ಗಮನಿಸಿದಾಗ ಹಾಗೂ ಮೇಲ್ಸೆತುವೆಗೆ ಹೋಲಿಸಿದಾಗ ಪಾದಚಾರಿ ಕೆಳ ಸೇತುವೆ ಅಸುರಕ್ಷಿತವಾಗಿದೆ ಎಂದು ಖಚಿತ ಪಡಿಸಿಕೊಂಡಿರುವದರಿಂದ ಬಿ.ಆರ್.ಟಿ.ಎಸ್ ಯೋಜನೆ ಅಡಿಯಲ್ಲಿ ಯಾವುದೇ ರಸ್ತೆ ಕೆಳಸೇತುವೆಗೆ ಅವಕಾಶ ಕಲ್ಪಿಸಲಾಗಿಲ್ಲ.

ಈ ಸಮಯವು ಜನರ ದಟ್ಟಣೆಯ ಮೇಲೆ ಅವಲಂಬಿತವಾಗಿರುತ್ತದೆ. ಸಾಮನ್ಯವಾಗಿ 15-20 ಸೆಕೆಂಡ್ಗಳು ನಿಲುಗಡೆ ಆಗುವ ಅಂದಾಜಿದೆ.

ಇಲ್ಲ ವೇಗದೂತ ಹಾಗೂ ಸಾಮಾನ್ಯ ಸೇವೆಯ ಬಸ್ಸುಗಳು ಇರುತ್ತವೆ.

ಹೌದು. ನಮ್ಮ ಅಧಿಕೃತ ವೆಬ್ಸೈಟ್ ಹಾಗೂ ಹೆಚ್.ಡಿ.ಬಿ.ಆರ್.ಟಿ.ಎಸ್ ಕಛೇರಿಗಳಲ್ಲಿ ಹಾಗೂ ಬಸ್ ನಿಲ್ದಾಣದಲ್ಲಿ ಮಾಹಿತಿಯನ್ನು ನೀಡಲಾಗುತ್ತದೆ. ಟಕೇಟ್ ನೀಡುವ ಸಿಬ್ಬಂದಿಗೆಳು ಪ್ರಯಾಣಿಕರಿಗೆ ಅಗತ್ಯ ಮಾಹಿತಿಯನ್ನು ನೀಡುವರು.

ಮಿಶ್ರವಾಹನ ಸಂಚಾರಕ್ಕೆ ಹೋಲಿಸಿದಾಗ ಹೆಚ್.ಡಿ.ಬಿ.ಆರ್.ಟಿ.ಎಸ್ ಬಸ್ಸುಗಳಿಗೆ ಆದ್ಯತೆ ನೀಡುವುದರಿಂದ ಈ ಸಮಯ ಕಡಿಮೆಯಾಗುತ್ತದೆ.

ಬಿ.ಆರ್.ಟಿ.ಎಸ್ ಬಸ್ಗಳನ್ನು ಕೆ.ಎಸ್.ಆರ್.ಟಿ.ಸಿ ಸಂಸ್ಥೆಯು ನಿರ್ವಹಿಸುತ್ತದೆ. ಕೆ.ಎಸ್.ಆರ್.ಟಿ.ಸಿ ಬಸ್ಗಳು ಉಪ ರಸ್ತೆಗಳಲ್ಲಿ (ಈeeಜeಡಿ ಟiಟಿe) ಹಳ್ಳಿಗಳಲ್ಲಿ ಸೇವೆಯನ್ನು ಒದಗಿಸುತ್ತವೆ. ಖಾಸಗಿ ಬಸ್ಸುಗಳು ಮಿಶ್ರ ಸಂಚಾರ ರಸ್ತೆಗಳ ಮೇಲೆ ಸಂಚಾರಿಸಬಹುದಾಗಿದೆ.

ಹೆಚ್.ಡಿ.ಬಿ.ಆರ್.ಟಿ.ಎಸ್ ಕಾರ್ಯ ನಿರ್ವಹಿಸಲು ಶುರುವಾದ ನಂತರ ಸಾಧ್ಯವಾದ ಮಟ್ಟಿಗೆ ಮರಗಳನ್ನು ಉಳಿಸಲಾಗಿದೆ. ಅನಿವಾರ್ಯತೆ ಒದಗಿದಲ್ಲಿ ಮರಗಳನ್ನು ಕಡಿಯಲಾಗುವುದು. ಮರುಸಸಿ ನೆಡುವ ಕಾರ್ಯಕ್ರಮಕ್ಕೆ ಹೆಚ್.ಡಿ.ಬಿ.ಆರ್.ಟಿ.ಎಸ್ ಈಗಾಗಲೇ ಚಾಲನೆ ನೀಡಿದ್ದು ಕಡಿದ ಮರಗಳಿಗಿಂತ ಹೆಚ್ಚು ಸಸಿಗಳನ್ನು ನಡಲಾಗಿದೆ. .ಬಿ.ಆರ್.ಟಿ.ಎಸ್ ಕಾಮಗಾರಿಯು ಮುಕ್ತಾಯಗೊಂಡ ನಂತರ ಬಿ.ಆರ್.ಟಿ.ಎಸ್ ಕಾರಿಡಾರ್ ಉದ್ದಕ್ಕೂ ಸಸಿಗಳನ್ನು ನೆಡಲು ಯೋಜಿಸಲಾಗಿದೆ.

ಹಂತ ಒಂದರಲ್ಲಿ 1750 ಮರಗಳು ಹಾಗೂ ಹಂತ ಎರಡರಲ್ಲಿ 860 ಮರಗಳನ್ನು ಕಡಿಯಲಾಗಿದೆ. ಒಟ್ಟು 18,000 ಸಸಿಗಳನ್ನು ನೆಡುವ ಯೋಜನೆ ಹಾಕಿಕೊಳ್ಳಲಾಗಿದ್ದು 2013 ರಲ್ಲಿ 8000 ಸಸಿಗಳನ್ನು ಮತ್ತು 2014 ರಲ್ಲಿ 4000 ಸಸಿಗಳನ್ನು 2015 ರಲ್ಲಿ 1800 ಸಸಿಗಳನ್ನು ಶಾಲಾ ಕಾಲೇಜುಗಳು ಹಾಗೂ ಉದ್ಯಾನವನಗಳಲ್ಲಿ ನಡೆಲಾಗಿದೆ ಮತ್ತು 2016 ರಲ್ಲಿ 11600 ಸಸಿಗಳನ್ನು ನವಲೂರು ಬೆಟ್ಟದಲ್ಲಿ ನೆಡಲಾಗಿದೆ.

ಉ:- ಹೌದು ವಹಿಸಿದೆ. ಚೆರ್ರಿ, ಹುಲಗಲ್, ಬಾದಾಮಿ, ಸಂಪಿಗೆ, ನೇರಳೆ, ಅತ್ತಿಮರ , ಕಟ್ಟೋಡ, ಸೀತಾ ಅಶೋಕ, ಬೇವು ನಲ್ಲಿಮರ ಬಸವನ ಪಾದ ಅರಳಿ ಹಲಸು ಸಸಿಗಳನ್ನು ನೆಡಲಾಗಿದೆ.

ಉ:- ಹೌದು. ಚಾಲಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ವಿಶೇಷ ತರಭೇತಿ ನೀಡಲಾಗುವುದು. ತರಬೇತಿಯಲ್ಲಿ ಗ್ರಾಹಕ ಸೇವೆ, ಸಂವಹನ ಗುಣಮಟ್ಟ ಹಾಗೂ ಸಂಪರ್ಕ, ಪ್ರಯಾಣಿಕರೊಡನೆ ನಡವಳಿಕೆ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಕ್ರಮವಾಗಿ ಆಗಾಗ್ಗೆ ಪ್ರಯಾಣಿಕರೊಡನೆ ಸಮೀಕ್ಷೆ ನಡೆಸಿ ಅವರಿಂದ ಸಲಹೆ ಸೂಚನೆಗಳನ್ನು ಪಡೆದುಕೊಂಡು ಸಿಬ್ಬಂದಿ ನಡವಳಿಕೆಯಲ್ಲಿ ಅಗತ್ಯ ಬದಲಾವಣೆ ಬೇಕಾದಲ್ಲಿ ಸಿಬ್ಬಂದಿ ಸುಧಾರಣಾ ನೀತಿಯನ್ನು ಅನುಸರಿಸಲಾಗುತ್ತದೆ.