HDBRTS Logo
HDBRTS Logo
HDBRTS Logo
ಪ್ರಮುಖ ಅಂಶಗಳು
ಬಿ.ಆರ್.ಟಿ.ಎಸ್. ಕಾರಿಡಾರ್

ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್. ಯೋಜನೆಯ ರಸ್ತೆಯ ಉದ್ದ 22.25 ಕಿ.ಮೀ.ಹಾಗೂ ರಸ್ತೆಯ ಅಗಲ 35 ಮೀ ಹಾಗೂ 44 ಮೀ ವಿಸ್ತಾರವನ್ನು ಹೊಂದಿರುತ್ತದೆ.ಹುಬ್ಬಳ್ಳಿಯ ಹೊಸೂರ್ ವೃತ್ತದಿಂದ ಧಾರವಾಡ ಜುಬಲಿ ವೃತ್ತದವರೆಗೆ ಬಿ.ಆರ್.ಟಿ.ಎಸ್.ಬಸ್ ಸಂಚಾರಕ್ಕಾಗಿ ಪ್ರತ್ಯೇಕ ಪಥಗಳನ್ನು ನಿರ್ಮಿಸಲಾಗುವುದು. ಅದರಂತೆ ಹೊಸೂರ್ ವೃತ್ತದಿಂದ ಹುಬ್ಬಳ್ಳಿಯ ಸಿಬಿಟಿವರೆಗೆ ಹಾಗೂ ಜುಬಲಿ ವೃತ್ತದಿಂದ ಧಾರವಾಡದ ಸಿಬಿಟಿ ವರೆಗೆ ಬಿ.ಆರ್.ಟಿ.ಎಸ್. ಬಸ್ ಗಳು ಮಿಶ್ರ ಸಂಚಾರದಲ್ಲಿ ಸಂಚರಿಸುತ್ತವೆ. ಇಲ್ಲಿ ಇದಕ್ಕಾಗಿ ಪ್ರತ್ಯೇಕ ಪಥಗಳಿರುವುದಿಲ್ಲ. 44 ಮೀ ಹಾಗೂ 35 ಮೀ ರಸ್ತೆಯ ಅಗಲದಲ್ಲಿ ಬಿ.ಆರ್.ಟಿ.ಎಸ್.ಗಾಗಿ ಕ್ರಮವಾಗಿ 4 ಹಾಗೂ 3 ಪಥಗಳು ಹಾಗೂ ಮಿಶ್ರ ಸಂಚಾರಕ್ಕಾಗಿ, ಎರಡು ಬದಿಗೆ 4 ಪಥಗಳ ರಸ್ತೆ, ಪಾದಚಾರಿ ಮಾರ್ಗ ಹಾಗೂ ಯುಟಿಲಿಟಿ ಡಕ್ಟ ಇತ್ಯಾದಿಗಳಿಗಾಗಿ ವ್ಯವಸ್ಥೆ ಕಲ್ಪಿಸಲಾಗಿದೆ.

ಬಿ.ಆರ್.ಟಿ ಕಾರಿಡಾರ್, ಮಿಶ್ರ ಸಂಚಾರ ಪಥ, ಪಾದಚಾರಿ ಮಾರ್ಗ ಇತ್ಯಾದಿಗಳನ್ನು ಹೊಂದಿರುವ ರಸ್ತೆಯ ಅಗಲೀಕರಣ ದ ವಿವರಗಳು ಈ ಕೆಳಕಂಡಂತಿದೆ:
ಹೊಸೂರು ವೃತ್ತ, ಹುಬ್ಬಳ್ಳಿಯಿಂದ ನವೀನ್ ಹೋಟೆಲ್ ಹುಬ್ಬಳ್ಳಿ ವರೆಗೆ - 35ಮೀ
ನವೀನ ಹೋಟೆಲ್ ಹುಬ್ಬಳ್ಳಿಯಿಂದ ಗಾಂಧಿನಗರ ಕ್ರಾಸ್ ಧಾರವಾಡದವರೆಗೆ - 44ಮೀ
ಗಾಂಧಿನಗರ ಕ್ರಾಸ್ ಧಾರವಾಡದಿಂದ ಜೂಬಲಿ ವೃತ್ತ ಧಾರವಾಡದ ವರೆಗೆ - 35ಮೀ

ಬಿ.ಆರ್.ಟಿ.ಎಸ್.ವ್ಯವಸ್ಥೆಯು ನಿಯಂತ್ರಿತ ಬಸ್ ನಿಲ್ದಾಣಗಳು, ಸಂಯೋಜಿತ ಟಿಕೆಟ್ ದರ ಸ್ಮಾರ್ಟ್ ಕಾರ್ಡ್ ಮೂಲಕ ಆಫ್ ಬೋರ್ಡ್ ಟಿಕೆಟಿಂಗ್ ವ್ಯವಸ್ಥೆ, ಉತ್ತಮ ದರ್ಜೆಯ ಬಸ್ ಗಳನ್ನು ಒಳಗೊಂಡಿದೆ. ಬಿ.ಆರ್.ಟಿ.ಕಾರಿಡಾರನಲ್ಲಿ ಪ್ರತಿ ಬದಿಗೆ 2 ಪಥಗಳನ್ನು ಕಲ್ಪಿಸಲಾಗಿದೆ. ಓವರ್ ಟೇಕಿಂಗ್ ಸೌಲಭ್ಯ ಒದಗಿಸಲು ಪ್ರತಿ ಬದಿಗೆ 2 ಪಥಗಳನ್ನು ನಿರ್ಮಿಸಲಾಗುವುದು. ಸಾಮಾನ್ಯ ಹಾಗೂ ಎಕ್ಸ್ ಪ್ರೆಸ್ ಬಸ್ ಸೇವೆ ಒದಗಿಸಲಾಗುವುದು. ಉಣಕಲ್ ಗ್ರಾಮ ಮತ್ತು ನವನಗರದಲ್ಲಿ ಬಿ.ಆರ್.ಟಿ.ಗಾಗಿ ಪ್ಲೈ ಓವರ್ ನಿರ್ಮಿಸಲಾಗುವುದು.

corridor
Central Bus Lanes
ರಸ್ತೆಯ ಮಧ್ಯದಲ್ಲಿ ಬಸ್ ನಿಲ್ದಾಣಗಳನ್ನೊಳಗೊಂಡ ಬಿ.ಆರ್.ಟಿ ಪಥಗಳು

ಬಿ.ಆರ್.ಟಿ. ಕಾರಿಡಾರನಲ್ಲಿ ಮಧ್ಯಂತರ ಬಸ್ ನಿಲ್ದಾಣ ಕಲ್ಪಿಸುವುದರಿಂದ ಮಿಶ್ರ ಸಂಚಾರದಿಂದ ಉಂಟಾಗುವ ಅಡೆತಡೆಗಳನ್ನು ನಿಯಂತ್ರಿಸಬಹುದಾಗಿರುತ್ತದೆ.

Central Bus Lanes
ಮೀಸಲಿಟ್ಟಿರುವ ಬಿ ಆರ್ ಟಿ ಪಥಗಳು

ಬಿ.ಆರ್.ಟಿ. ಪಥವನ್ನು ಬಿ.ಆರ್.ಟಿ ಬಸ್ ಗಳಿಗಾಗಿ ಮಾತ್ರ ಮೀಸಲ್ಪಟ್ಟಿದ್ದು, ಅನ್ಯ ವಾಹನಗಳ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಬಿ.ಆರ್.ಟಿ ಪಥದಲ್ಲಿ ಚಲಿಸುವ ಬಸ್ಸಿನ ಸರಾಸರಿ ವೇಗವು ಸಾಮಾನ್ಯ ಪಥಗಳಲ್ಲಿ ಸಂಚರಿಸುವ ವಾಹನಗಳಿಗಿಂತ ಹೆಚ್ಚಾಗಿರುತ್ತದೆ. ಬಿ.ಆರ್.ಟಿ.ಎಸ್.ನ ಎಲ್ಲಾ ಬಸ್ ಗಳ ರಚನೆಯು ಒಂದೇ ರೀತಿಯಾಗಿದ್ದು, ಬಸ್ಸಿನ ಪ್ರವೇಶದ್ವಾರದ ಸ್ಥಳ ಮತ್ತು ಅಳತೆ ಹಾಗೂ ಬಸ್ಸಿನ ಎತ್ತರವೂ ಒಂದೇ ರೀತಿಯಾಗಿದೆ. ಜಂಕ್ಷನ್ ಗಳಲ್ಲಿ, ಕಡಿಮೆ ಸಿಗ್ನಲ್ ಹಂತಗಳು ಇರುವುದರಿಂದ ಬಸ್ ಸಂಚಾರವನ್ನು ಸುಗಮವಾಗಿ ನಿರ್ವಹಿಸಬಹುದಾಗಿದೆ.

Central Bus Lanes
ಜಿಪಿಎಸ್ ನಿಯಂತ್ರಣ

ಬಿ.ಆರ್.ಟಿ.ಬಸ್ ಗಳಲ್ಲಿ ಅತ್ಯಾಧುನಿಕ ಜಿಪಿಎಸ್ ಸಾಧನವನ್ನು ಅಳವಡಿಸಲಾಗುವುದು. ಈ ವ್ಯವಸ್ಥೆಯಿಂದಾಗಿ ಬಸ್ ಪ್ರಯಾಣಿಕರಿಗೆ ಬಸ್ ಗಳ ಸಂಚಾರದ ಸಮಯ ಇತ್ಯಾದಿ ಮಾಹಿತಿಗಳನ್ನು ಶೀಘ್ರವಾಗಿ ಪಡೆಯಲು ಅನುಕೂಲವಾಗುವುದು. ಈ ಜಿಪಿಎಸ್ ಸಾಧನದಿಂದಾಗಿ ಬಸ್ ನ ಮಾಹಿತಿ ದತ್ತಾಂಶಗಳನ್ನು ಪಡೆಯಬಹುದು.

Central Bus Lanes
ಟಿಕೆಟ ಗಾಗಿ ಪ್ರತ್ಯೇಕ ಘಟಕಗಳು

ಜನರಿಗೆ ಪ್ರಯಾಣಿಸಲು ಪೇಪರ್ ಟಿಕೆಟ್/ಸ್ಮಾರ್ಟ್ ಕಾರ್ಡ್/ಟೋಕನ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಟಿಕೆಟ್ ಗಳನ್ನು ಬಸ್ ನಿಲ್ದಾಣದಲ್ಲಿಯೇ ಪ್ರಯಾಣಿಕರಿಗೆ ಕೊಡಬಹುದಾಗಿದ್ದು, ಸಮಂಜಸವಾದ ಟಿಕೆಟ್ ಅಥವಾ ಸ್ಮಾರ್ಟ್ ಕಾರ್ಡ್ ಇದ್ದಲ್ಲಿ ಮಾತ್ರ ಪ್ಲಾಟ್ ಫಾರಂ ಒಳಗೆ ಪ್ರವೇಶಿಸಲು ಅವಕಾಶವಿರುವುದು. ಪ್ಲಾಟಫಾರಂ ಒಳಗಿನ ಪ್ರವೇಶವನ್ನು ನಿಯಂತ್ರಿಸಲು ರಕ್ಷಣಾ ದ್ವಾರವನ್ನು (Flap gate) ನಿರ್ಮಿಸಲಾಗುವುದು.

Central Bus Lanes
ಸಮತಟ್ಟಾದ ಹತ್ತುವ ಮತ್ತು ಇಳಿಯುವ ಸೌಲಭ್ಯ

ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಸರಾಗವಾಗಿ, ಅನುಕೂಲಕರವಾಗಿ ಹತ್ತಲು ಮತ್ತು ಇಳಿಯಲು ಪ್ಲಾಟ್ ಫಾರಂಗಳು ಸಮತಟ್ಟಾಗಿದ್ದು ಸುಗಮ ಓಡಾಟಕ್ಕೆ ಪೂರಕವಾಗಿದೆ. ಪ್ರಸ್ತಾಪಿತ ಬಿ.ಆರ್.ಟಿ ವ್ಯವಸ್ಥೆಯಲ್ಲಿ ಬಸ್ ನಲ್ಲಿ ಹತ್ತಲು ಮತ್ತು ಇಳಿಯಲು ಯಾವುದೇ ಮೆಟ್ಟಿಲುಗಳ ಅವಶ್ಯಕತೆ ಇರುವುದಿಲ್ಲ.