HDBRTS Logo
HDBRTS Logo
HDBRTS Logo
ಸ್ವಲ್ಪ ನಮ್ಮ ಬಗ್ಗೆ

ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್. ಕಂಪನಿಯು ಕರ್ನಾಟಕ ಸರ್ಕಾರದ ಅಂಗಸಂಸ್ಥೆಯಾಗಿದ್ದು, ಕಂಪನಿಯನ್ನು ಕಂಪನಿ ಕಾಯ್ದೆಯಡಿಯಲ್ಲಿ ಮೇ, 7. 2012 ರಂದು ನೋಂದಾಯಿಸಲಾಗಿದೆ.ಈ ಕಂಪನಿಯನ್ನು ಕರ್ನಾಟಕ ಸರ್ಕಾರವು ಹುಬ್ಬಳ್ಳಿ-ಧಾರವಾಡ ಅವಳಿನಗರಗಳ ಮಧ್ಯೆ ಬಿ.ಆರ್.ಟಿ.ಎಸ್.ಯೋಜನೆಯ ಅನುಷ್ಠಾನದ ನಿರ್ದಿಷ್ಠ ಉದ್ದೇಶಕ್ಕಾಗಿ ಸ್ಥಾಪಿಸಿದೆ.

ಕಂಪನಿಯು 20 ಕೋಟಿ ಅಧಿಕೃತ ಷೇರು ಬಂಡವಾಳ ಹೊಂದಿದೆ.ಇದರಲ್ಲಿ 70% ರಷ್ಟು ಪಾಲನ್ನು ಕರ್ನಾಟಕ ಸರ್ಕಾರ ಹೊಂದಿದೆ. ಉಳಿದ 30% ರಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರಗಳು ಒಟ್ಟಾಗಿ ಷೇರು ಹೊಂದಿವೆ.ಕಂಪನಿಯ ವ್ಯವಹಾರಗಳನ್ನು ನಿರ್ದೇಶಕರ ಮಂಡಳಿಯ ಮೂಲಕ ನಿರ್ವಹಿಸಲಾಗುತ್ತದೆ. ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್.ಯೋಜನೆಯ ವಿವಿಧ ಘಟಕಗಳ ಕಾಮಗಾರಿಗಳು ಈಗಾಗಲೇ ಪ್ರಾರಂಭವಾಗಿದ್ದು, ಯೋಜನೆಯನ್ನು 2017 ರ ವೇಳೆಗೆ ಮುಕ್ತಾಯಗೊಳಿಸುವ ನಿರೀಕ್ಷೆಯನ್ನು ಹೊಂದಿದೆ.

ಮುನ್ನೋಟ

ಸುಸ್ಥಿರ, ಸುರಕ್ಷಿತ ಶೀಘ್ರ ಸಾರಿಗೆ ವ್ಯವಸ್ಥೆಯನ್ನು ನಿರ್ಮಿಸಿ ವಿಶ್ವದರ್ಜೆಯ ತಾಂತ್ರಿಕತೆಗಳನ್ನು ಅಳವಡಿಸಿ ಪ್ರಯಾಣಿಕರಿಗೆ ಅನುಕೂಲಕರ ಹಾಗೂ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ದೇಶದಲ್ಲಿಯೇ ಹುಬ್ಬಳ್ಳಿ-ಧಾರವಾಡ ಅವಳಿನಗರಗಳನ್ನು ಸುಸ್ಥಿರ ಹಾಗೂ ವಾಸೋಪಯೋಗ್ಯ ನಗರಗಳನ್ನಾಗಿ ಮಾಡುವ ಮಹತ್ವದ ಗುರಿಯನ್ನು ಈ ಯೋಜನೆ ಹೊಂದಿದೆ.

ಧ್ಯೇಯೋದ್ದೇಶ

ಯೋಜನೆಯನ್ನು ಉತ್ತಮ ಗುಣಮಟ್ಟ ಹಾಗೂ ಶ್ರೇಷ್ಠ ದರ್ಜೆಯ ಸೇವೆಯೊಂದಿಗೆ 2017 ರಲ್ಲಿ ಕಾರ್ಯಾರಂಭ ಮಾಡುವುದು.

ಉದ್ದೇಶಗಳು

ವೈಜ್ಞಾನಿಕ ಭೂ ಬಳಕೆಯ ತಳಹದಿಯ ಮೇಲೆ ಸಾರಿಗೆ ಯೋಜನೆಯನ್ನು ರೂಪಿಸಿ ಸುಸ್ಥಿರ ನಗರ ಯೋಜನೆಯ ನಿರ್ಮಾಣ.

ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಜನಾಕರ್ಷಣೆಯನ್ನಾಗಿ ಮಾಡಿ ಸುರಕ್ಷಿತ, ಶೀಘ್ರ ಸಂಚಾರ ವ್ಯವಸ್ಥೆ ರೂಪಿಸಿ ಜನಪ್ರಿಯಗೊಳಿಸುವುದು.

ಅಲ್ಪ ದೂರದ ಪ್ರಯಾಣಗಳಿಗೆ ಸೈಕಲ್ ಮತ್ತು ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಿ ಪ್ರೋತ್ಸಾಹಿಸುವುದು.

ನಗರ ಸಾರಿಗೆ ಮತ್ತು ನಗರ ಯೋಜನೆ ಹಾಗೂ ವೃತ್ತಿಪರ ಯೋಜನೆಯ ನಿರ್ವಹಣೆಗಾಗಿ ಸಾಮರ್ಥ್ಯ/ಕೌಶಲ್ಯ ಅಭಿವೃದ್ಧಿಪಡಿಸುವುದು

ಯೋಜನೆ ಅನುಷ್ಠಾನದ ಸಂದರ್ಭದಲ್ಲಿ ಸಾರ್ವಜನಿಕರನ್ನು ಪಾಲ್ಗೊಳ್ಳಲು ಪ್ರೋತ್ಸಾಹಿಸುವುದು.