HDBRTS Logo
HDBRTS Logo
HDBRTS Logo
ಕುಂದುಕೊರತೆ ನಿವಾರಣಾ ಪ್ರಕ್ರಿಯೆ

ಕುಂದುಕೊರತೆ ನಿವಾರಣಾ ಸಮಿತಿಯನ್ನು ಭೂಸ್ವಾಧೀನದಿಂದ ಬಾಧಿತರಾದವರ ಕುಂದುಕೊರೆತೆಗಳನ್ನುಆಲಿಸಲು ಮತ್ತು ನಿವಾರಿಸಲು ರಚಿಸಲಾಗಿದೆ. ಜಿಲ್ಲಾಧಿಕಾರಿ, ಧಾರವಾಡ ರವರ ಅಧ್ಯಕ್ಷತೆಯಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಮಿತಿಯನ್ನು ರಚಿಸಲಾಗಿದೆ.

ಯೋಜನಾ ಬಾಧಿತರ ಕುಂದು ಕೊರತೆಗಳನ್ನು ನಿವಾರಿಸುವುದು ಸಮಿತಿಯ ಮುಖ್ಯ ಉದ್ದೇಶವಾಗಿದೆ ಮತ್ತು ಈ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್. ಕಂಪನಿಯು ತೆಗೆದುಕೊಂಡ ಕ್ರಮಗಳನ್ನು ಜಾರಿಗೊಳಿಸುವುದಾಗಿದೆ.

ಸಮಿತಿಯು ಪ್ರತಿ ತಿಂಗಳು ಸಭೆ ನಡೆಸುವುದು ಹಾಗೂ ಯೋಜನಾ ಬಾಧಿತರ ಕುಂದು ಕೊರತೆಗಳಿಗೆ ಸೂಕ್ತ ಪರಿಹಾರ ಕಲ್ಪಿಸುವುದು, ಸಮಿತಿಯ ಮುಖ್ಯ ಉದ್ದೇಶವಾಗಿರುತ್ತದೆ. ಸಮಿತಿಯ ಕಾರ್ಯ ಪ್ರಕ್ರಿಯೆ ಈ ಕೆಳಗಿನಂತಿದೆ.

ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ,ಎಸ್. ಕಂಪನಿಯ ವ್ಯವಸ್ಥಾಪಕರು (ಆರ್.ಆರ್. ಮತ್ತು ಮಾನವ ಸಂಪನ್ಮೂಲ) ಯಾವುದೇ ದೂರುಗಳಿದ್ದಲ್ಲಿ ಸ್ವೀಕರಿಸಿ ಅದನ್ನು ದಾಖಲಿಸಿಕೊಳ್ಳುತ್ತಾರೆ. ಪ್ರತಿಯೊಂದು ದೂರಿಗೂ ಸಂಖ್ಯೆಯನ್ನು ನೀಡಲಾಗುತ್ತದೆ. ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್. ಕಂಪನಿಯ ಇ.ಎಸ್.ಡಿ.ಸಿ (ESDC) ವಿಭಾಗವು ದೂರುಗಳನ್ನು ಪರಿಶೀಲಿಸಿ ಮತ್ತು ಪರಿಹರಿಸಲು ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ.

ದೂರಗಳ ಪರಿಹಾರ ಕ್ರಮಗಳ ಬಗ್ಗೆ ವ್ಯವಸ್ಥಾಪಕರು (ಆರ್.ಆರ್. ಮತ್ತು ಮಾನವ ಸಂಪನ್ಮೂಲ) ಕುಂದು ಕೊರತೆ ನಿವಾರಣ ಸಮಿತಿಗೆ ಪರಿಶೀಲನೆ ಮತ್ತು ಮುಂದಿನ ಆದೇಶಕ್ಕಾಗಿ ಸಲ್ಲಿಸಲಾಗುತ್ತದೆ.